ಲಾಲಿ ಹಯವದನ

 

ಲಾಲಿ ಶ್ರೀ ಹಯವದನ ಲಾಲಿ ರಂಗವಿಠಲ

ಲಾಲಿ ಗೋಪಿನಾಥ ಲಕ್ಷ್ಮೀ ಸಮೇತ... ಲಾಲಿ.

 

ಮುತ್ತು ಮಾಣಿಕ್ಯ ಬಿಗಿದ ತೊಟ್ಟಿಲೊಳಗೊಲ್ಲ

ಎತ್ತಿದರು ಎನ್ನಯ್ಯ ಕೈಯೊಳಗೆ ನಿಲ್ಲ

ಭಕ್ತರಿಗೆ ವರಗಳನು ಕೊಡುವ ಹೊತ್ತಿಲ್ಲ

ಪುತ್ರನಾ ಎತ್ತಿಕೋ ನಂದಗೋಪಾಲ... ಲಾಲಿ.

 

ಮನೆಯೊಳಗೆ ಇವನೀತ ಬಹುರಚ್ಚೆವಂತ

ಮನೆವಾರ್ತೆ ಯಾರು ಮಾಡುವರು ಶ್ರೀಕಾಂತ

ಗುಣಗುಣಗೊಳಗಿಪ್ಪ ಬಹು ಗುಣವಂತ

ಗುಣಭಗ್ನನಾಗನಿವ ಶ್ರೀ ಲಕ್ಷ್ಮೀಕಾಂತ... ಲಾಲಿ.

 

ಶ್ರೀ ರಾಂಬುನಿಧಿಯೊಳಗೆ ಸಜ್ಜೆಯೊಳಗಿರುವ

ಶ್ರೀ ರಮಣ ಭಕ್ತರಿಚ್ಚೆಗೆ ನಲಿದು ಬರುವ

ಕಾರುಣ್ಯ ಹಯವದನ ಕಾಯ್ದ ತುರುಕರುವ

ನಾರಿನೀರೆಯರೊಳು ಮೆರವ ಕಡು ಚೆಲುವ...ಲಾಲಿ. /ಪ/