ಯಾಕೆ ನಿರ್ದಯನಾದೆ

ರಚನೆ: ಶ್ರೀ ಪುರಂದರ ದಾಸರು

ರಾಗ: ಕಾಂಬೋಜಿ

ತಾಳ: ಝಂಪೆ

 

ಯಾಕೆ ನಿರ್ದಯನಾದೆ ಎಲೊ ದೇವನೆ            ||ಪ||

ಶ್ರೀಕಂತ ಎನಮೇಲೆ ಎಳ್ಳಷ್ಟು ದಯವಿಲ್ಲ         ||ಅ ಪ||

 

ಕಂಗೆಟ್ಟು ಕಂಭದಲಿ ಒಡೆದು ಬಳಲಿ ಬಂದು |

ಹಿಂಗದೆ ಪ್ರಹ್ಲಾದನಪ್ಪಿಕೊಂಡೆ ||

ಮಂಗಳಪದವಿತ್ತು ಮನ್ನಿಸಿದೆ ಅವ ನಿನಗೆ |

ಬಂಗರವೆಷ್ಟು ಕೊಟ್ಟನು ಪೇಳೊ ಹರಿಯೆ        ||೧||

 

ಸಿರಿದೇವಿಗ್ಹೇಳದೆ ಸೆರಗು ಸಂವರಿಸಿದೆ |

ಗರುಡನ ಮೇಲೆ ಗಮನವಾಗದೆ ||

ಭರದಿಂದ ನೀ ಬಂದು ಕರಿಯನುದ್ಧರಿದೆ |

ಕರಿರಾಜ ಎಷ್ಟು ಕನಕವ ಕೊಟ್ಟ ಹರಿಯೆ            ||೨||

 

ಅಜಮಿಳನು ಅಣ್ಣನೆ ವಿಭೀಷಣನು ತಮ್ಮನೇ |

ನಿಜದಿ ರುಕ್ಮಾಂಗದನು ನಿನ್ನ ಮೊಮ್ಮಗನೆ ||

ಭಜನೆಗವರೇ ಹಿತರೆ ನಾ ನಿನಗೆ ಅನ್ಯನೇ |

ತ್ರಿಜಗಪತಿ ಸಲಹೆನ್ನ ಪುರಂದರವಿಠಲ ||೩||