ದೇವರನಾಮ: ಲಂಬೋದರ ರಕ್ತಾಂಬರಧರ
ರಚನೆ: ಶ್ರೀ ಜಗನ್ನಾಥ ದಾಸರು
ರಾಗ: ಮಧ್ಯಮಾವತಿ
ತಾಳ: ಆಟ
ಲಂಬೋದರ ರಕ್ತಾಂಬರಧರ ||ಪ||
ಅಂಬರಾಧೀಶ್ವರ ಗೌರಿಕುಮಾರ ||ಅ ಪ||
ಸಿಂಧುರ ವದನಾರವಿಂದ ಸುಂದರ
ವಿಘ್ನಾಂಧಕಾರ ಶರಚ್ಚಂದಿರ ಧೀರ ||೧||
ವರ ಪಾಶಾಂಕುಶ ದಂತ ಧರ ಸುಮೋಹಕ
ಶೂರ್ಪಕರಣ ತ್ವಚ್ಛರಣ ಪಂಕಜಕಾ ನಮಿಪೆ ||೨||
ಜಗನ್ನಾಥವಿಠಲನ ಮಗನಾಗಿ ದ್ವಾಪರ
ಯುಗದಲಿ ಜನಿಸಿದ ಸುಗುಣ ನೀ ಸಲಹೋ ||೩||