ದೇವರನಾಮ: ಹೊಂದಿ ಬದುಕಿರೊ
ರಚನೆ: ಶ್ರೀ ಜಗನ್ನಾಥ ದಾಸರು
ರಾಗ: ಆರಭಿ
ತಾಳ: ಆಟ
ಹೊಂದಿ ಬದುಕಿರೊ ರಾಘವೇಂದ್ರ ರಾಯರ ||ಪ||
ಕುಂದದೆಮ್ಮನು ಕರುಣದಿಂದ ಪೊರೆವರ ||ಅ ಪ||
ನಂಬಿ ತುತಿಸುವ ನಕದಂಬಕಿಷ್ಟವ
ತುಂಬಿ ಕೊಡುವರು ಅನ್ಯರ್ಹಂಬಲೀಯನು ||೧||
ಅಲವಬೋಧರ ಸಮತಜಲಧಿಚಂದಿರ
ಒಲಿದು ಭಕ್ತರ ಕಾಯ್ವ ಸುಲಭ ಸುಂದರ ||೨||
ಗುರು ಸುಧಿಂದ್ರರ ವಿಮಲಕರಜರೆನಿಪರ
ಸ್ಮರಿಸಿ ಸುರುಚಿರ ವಿಮಲಚರಣ ಪುಷ್ಯರ ||೩||
ಘಾಲಲೋಚನ ವಿನುತ ಮೂಲರಾಮನ
ಲೀಲೆಯನುದಿನ ತುತಿಪ ಶೀಲ ಸದ್ಗುಣ ||೪||
ಭೂತ ಭಾವನ ಜಗನ್ನಾಥವಿಠಲನ
ಪ್ರೀತಿಪಾತ್ರನ ನಂಬಿರೀತನುದಿನ ||೫||