ಏನು ಧನ್ಯಳೋ ಲಕುಮಿ

ಶ್ರೀ ಪುರಂದರ ದಾಸರು

ರಾಗ: ತೋಡಿ

ತಾಳ: ರೂಪಕ

 

ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ

ಸಾನುರಾಗದಿಂದ ಹರಿಯ ತಾನೆ ಸೇವೆ ಮಾಡು ತಿಹಳು            ||ಪ||

 

ಕೋಟಿ ಕೋಟಿ ಭೃತ್ಯರಿರಲು | ಹಾಟಕಾಂಬರನ ಸೇವೆ |

ಸಾಟಿಯಿಲ್ಲದೆ ಮಾಡಿ | ಪೂರ್ಣ ನೋಟದಿಂದ ಸುಖಿಸುತಿಹಳು        ||೧||

 

ಛತ್ರ ಚಾಮರ ವ್ಯಜನ ಪರಿಯಂಕ | ಪಾತ್ರ ರೂಪದಲ್ಲಿ ನಿಂತು ||

ಛಿತ್ರ ಚರಿತನಾದ ಹರಿಯ | ನಿತ್ಯ ಸೇವೆ ಮಾಡುತಿಹಳು            ||೨||

 

ಸರ್ವತ್ರದಿ ವ್ಯಾಪ್ತನಾದ | ಸರ್ವ ದೋಷರಹಿತನಾದ ||

ಸರ್ವ ವಂದ್ಯನಾದ ಪುರಂದರ ವಿಟ್ಠಲನ್ನ ಸೇವಿಸುವಳೊ        ||೩||