ದೇವರನಾಮ: ಬಾರೊ ನಮ್ಮ ಮನೆಗೆ

ರಚನೆ: ಶ್ರ‍ೀ ಶ್ರ‍ೀಪಾದರಾಜರು

ರಾಗ: ಪುನ್ನಗವರಾಳಿ (ಪಹಾಡಿ)

ತಾಳ: ಆದಿ (ಕೆಹರವಾ)

 

ಬಾರೊ ನಮ್ಮ ಮನೆಗೆ ಗೋಪಾಲಕೃಷ್ಣ        ||ಪ||

 

ಗೊಲ್ಲಬಾಲಕರನು ನಿಲ್ಲಿಸಿ ಪೆಗಲೇರಿ |

ಗುಲ್ಲುಮಾಡದೆ ಮೊಸರೆಲ್ಲ ಕುಡಿದ ಕೃಷ್ಣ        ||೧||

 

ಮೂಜ್ಜಗವನೆಲ್ಲ ಬೊಜ್ಜೆಯೊಳಗೆ ಇಟ್ಟು |

ಗೆಜ್ಜೆಯಕಚ್ಚಿ ತಪ್ಹೆಜ್ಜೆಯನಿಕ್ಕುತ                ||೨||

 

ಅಂಗನೇಯರ ವ್ರತ ಭಂಗವ ಮಾಡಿದ |

ರಂಗವಿಠಲ ಭವಭಂಗವ ಮಾಡುವ        ||೩||