ದೇವರನಾಮ: ಆವ ಸಿರಿಯಲಿ
ರಚನೆ: ಶ್ರೀ ಕನಕ ದಾಸರು
ರಾಗ: ಕಾನಾಡ
ತಾಳ: ಆಟ
ಆವಸಿರ್ಯಲಿ ನೀನು ಎನ್ನ ಮರೆತೆ?
ದೇವ ಜಾನಕಿರಮಣ ಪೇಳು ರಘುಹ್ಪತಿಯೆ ||ಪ||
ಸುರರ ಸೆರೆಯನು ಬಿಡಿಸಿ ಬಂದೆನೆಂಬ ಸಿರಿಯೆ?
ಶರಧಿ ಸೇತುವೆಯ ಕಟ್ಟಿದೆನೆನ್ನುವ ಸಿರಿಯೆ
ಸ್ಥಿರವಾಗಿ ಹೇಳೆನಗೆ ಹೇಳು ರಘುಪತಿಯೆ ||೧|
ಕಡಲೊಳಗೆ ಮನೆ ಮಾಡಿ ಮಲಗಿದೆನೆಂಬ ಸಿರಿಯೆ ?
ಮೃದ ನಿನ್ನ ಸಖನಾದನೆಂಬ ಸಿರಿಯೆ
ಬಿಡದೆ ದ್ರೌಪದಿ ಮಾನ ಕಾಯ್ದೆನೆಂಬ ಸಿರಿಯೆ
ದೃಢ ವಾಗಿ ಹೇಳೆನಗೆ ದೇವಕಿ ಸುತನೆ ||೨||
ಭೂಮಿಯನು ಮೂರಡಿಯ ಮಾಡಿದೆನೆಂಬ ಸಿರಿಯೆ
ಕಾಮ ನಿನ್ನ ಸುತನಾದ ನೆಂಬ ಸಿರಿಯೆ
ಆ ಮಹಲಕುಮಿ ನಿನ್ನ ಸತಿಯಾದಳೆಂಬ ಸಿರಿಯೆ
ಪ್ರೇಮದಲಿ ಹೇಳೆನಗೆ ಸ್ವಾಮಿ ಅಚ್ಯುತನೆ ||೩||
ಮನುಜರೆಲ್ಲ್ರು ನಿನ್ನ ಸುತ್ತಿಸುವರೆಂಬ ಸಿರಿಯೆ
ಹನುಮ ನಿನ್ನ ಬಂಟನಾದನೆಂಬ ಸಿರಿಯೆ
ಬಿನುಗುದೈವಗಳು ನಿನಗೆಣ್ಯಿಲ್ಲವೆಂಬ ಸಿರಿಯೆ
ಅನುಮಾನ ಮಾಡದೆ ಪೇಳೊ ನರಹರಿಯೆ ||೪||
ಇಂತು ಸಿರಿಯಲಿ ನೀನು ಎನ್ನ ಮರೆತರೆ ಸ್ವಾಮಿ
ಪಂಥವೆ ನಿನಗಿದು ಆವ ನಡತೆ?
ಕಂತುಪಿತ ಕಾಗಿನೆಲೆಯದಿಕೇಶವ ರಂಗ
ಚಿಂತೆಯನು ಬಿಡಿಸಿ ಸಂತೋಷಪಡಿಸೊ ||೫||